130ಕ್ಕೂ ಅಧಿಕ ಸ್ಥಾನ ಪಡೆಯುತ್ತೇವೆ:ಬಿಎಸ್ ಯಡಿಯೂರಪ್ಪ ವಿಶ್ವಾಸ

ಕರ್ನಾಟಕದಲ್ಲಿ ಬಿಜೆಪಿ 130ಕ್ಕೂ ಅಧಿಕ ಸ್ಥಾನ ಪಡೆಯಲಿದೆ, ಟಿಎಸ್‌. ಶ್ರೀವತ್ಸ ರವರನ್ನ ಅತಿ ಹೆಚ್ಚಿನ ಮತಗಳ ಮುನ್ನಡೆಯಿಂದ ಗೆಲ್ಲಿಸಿ, ವೀರಶೈವ ಲಿಂಗಾಯತ ಸಮುದಾಯಕ್ಕೆ ಬಿಎಸ್. ಯಡಿಯೂರಪ್ಪ ಕರೆ…

ಮೈಸೂರಿನ ಬಿಎನ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಕೃಷ್ಣರಾಜ ಕ್ಷೇತ್ರದ ವೀರಶೈವ ಲಿಂಗಾಯತ ಸಮುದಾಯದ ಸಭೆಯನ್ನ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರವರ ನೇತೃತ್ವದಲ್ಲಿ ಆಯೋಜಿಲಾಗಿತ್ತು,

ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿಎಸ್. ಶ್ರೀವತ್ಸ ರವರಿಗೆ ವೀರಶೈವ ಲಿಂಗಾಯತ ಸಮುದಾಯ ಪೂರ್ಣಪ್ರಮಾಣದಲ್ಲಿ ಮತಚಲಾಯಿಸಿ ಅತಿಹೆಚ್ಚಿನ ಮತಗಳಿಂದ ಗೆಲ್ಲಿಸುವಂತೆ ಶ್ರಮವಹಿಸಿ ಸಹಕಾರ ನೀಡುವಂತೆ ಮನವಿ ಮಾಡಿದರು,

ಕೃಷ್ಣರಾಜ ಕ್ಷೇತ್ರದ ವೀರಶೈವ ಸಮುದಾಯದ ಸಭೆಯಲ್ಲಿ ಮಾಜಿ ಸಿಎಂ ಬಿಎಸ್. ಯಡಿಯೂರಪ್ಪ ರವರು ಮಾತನಾಡಿ ಕರ್ನಾಟಕದಲ್ಲಿ ಬಿಜೆಪಿ ಪಕ್ಷ 130ಕ್ಕೂ ಹೆಚ್ಚು ಸ್ಥಾನ ಗೆದ್ದು ಪೂರ್ಣಪ್ರಮಾಣದ ಬಹುಮತದ ಸರ್ಕಾರ ರಚನೆಯಾಗಲಿದೆ, ಅನ್ಯಪಕ್ಷಗಳ ಮಾತಿಗೆ ವದಂತಿಗಳಿಗೆ ವೀರಶೈವ ಸಮಾಜ ಕಿವಿಕೊಡಬಾರದು ಬಿಜೆಪಿ ಪಕ್ಷಕ್ಕೆ ಮತಚಲಾಯಿಸುವಂತೆ ಕಾರ್ಯೋನ್ಮುಖರಾಗಿ ತಮ್ಮೊಂದಿಗೆ ಉತ್ತಮ ಒಡನಾಟದಲ್ಲಿರುವ ಇನ್ನಿತರ ಕ್ಷೇತ್ರದವರಿಗೂ ಶ್ರೀವತ್ಸರವರ ಪರವಾಗಿ ವೀರಶೈವರು ಮತಯಾಚನೆ ಮಾಡಬೇಕು ಎಂದರು, ಕರ್ನಾಟಕದಲ್ಲಿ ಬಿಜೆಪಿ ಪಕ್ಷ ವೀರಶೈವರನ್ನ ರಾಜ್ಯದೆಲ್ಲಡೆ ಉತ್ತಮವಾಗಿ ನಡೆಸಿಕೊಂಡಿದೆ, ವೀರಶೈವರು ಸಂಘಟಿತರಾಗಿದ್ದಾರೆ ನನ್ನದೊಂದಿಗೆ ಎಲ್ಲಾ ಕಾಲದಲ್ಲೂ ಯಾವಗಲೂ ವೀರಶೈವ ಸಮುದಾಯ ನಿಂತಿದೆ ಈಭಾರಿ ನರೇಂದ್ರ ಮೋದಿ ಅಮಿತ್ ಶಾ ಜೆಪಿ ನಡ್ಡಾ ರವರೊಂದಿಗೆ ಮಾತನಾಡಿದ್ದೇನೆ ಬಿಜೆಪಿ ಸರ್ಕಾರ ರಚನೆ ಮಾಡೇಮಾಡುತ್ತೆವೆಂದು ಹಾಗಾಗಿ ರಾಜ್ಯದೆಲ್ಲಡೆ ಪ್ರವಾಸ ಮಾಡುತ್ತಿದ್ದೇನೆ, ಬಿಜೆಪಿ ಪಕ್ಷದ ಅಭ್ಯರ್ಥಿ ಟಿಎಸ್ ಶ್ರೀವತ್ಸ ರವರಿಗೆ ಸಂಪೂರ್ಣ ಆಶೀರ್ವಾದ ಮಾಡಿದ್ದೇನೆ ವೀರಶೈವರು ಹೆಚ್ಚಿನ ಸಂಖ್ಯೆಯಲ್ಲಿ ಮತಚಲಾಯಿಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಕೆಆರ್ ಕ್ಷೇತ್ರದ ಅಭ್ಯರ್ಥಿ ಟಿ ಎಸ್ ಶ್ರೀವತ್ಸ, ಮಾಜಿ ವಿಧಾನ ಪರಿಷತ್ ಸದಸ್ಯರಾದ ತೋಂಟದಾರ್ಯ, ವೀರಶೈವ ಸಮುದಾಯದ ಜಿಲ್ಲಾಧ್ಯಕ್ಷರಾದ ಕಾನ್ಯ ಶಿವಮೂರ್ತಿ, ಕೆ ಎನ್ ಪುಟ್ಟಬುದ್ದಿ, ಯು ಎಸ್ ಶೇಖರ್, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ರಾಜೇಂದ್ರ, ಕಾಪು ಸಿದ್ದಲಿಂಗ ಸ್ವಾಮಿ, ಮಾಜಿ ಮಹಾಪೌರರಾದ ಸುನಂದ ಪಾಲನೆತ್ರ, ನಗರಪಾಲಿಕ ಸದಸ್ಯರಾದ ಬಿ ವಿ ಮಂಜುನಾಥ್, ಜಗದೀಶ್, ಕೇಬಲ್ ಮಹೇಶ್, ನಿರಂಜನ್ ಮೂರ್ತಿ, ಜಯಶಂಕರ್ , ಜೀವದಾರ ಗಿರೀಶ್, ಪುಟ್ಟರಾಜಪ್ಪ, ಸಂತೋಷ್ ಕುಮಾರ್, ಪ್ರಕಾಶ್ ಪಟೇಲ್, ಜಯ ಗೌಡ, ಹಾಗೂ ಇನ್ನಿತರರು ಭಾಗಿಯಾಗಿದ್ದರು

ವರದಿ:ನಂದಿನಿ ಮೈಸೂರು

Leave a Reply

Your email address will not be published. Required fields are marked *