
ನಕಲಿ ಬಿಲ್ ಸೃಷ್ಟಿಸಿ ಲಕ್ಷಾಂತರ ಅನುದಾನ ಗುಳುಂ ಮಾಡಿದ ಪಿಡಿಓ.
ಬೀದರ್: ಲಂಚ ಪಡೆಯುವಾಗ ರೇಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದು ಜೈಲುಪಾಲಾದ ಅಧಿಕಾರಿ ಈಗ ಮತ್ತೆ ಭ್ರಷ್ಟಾಚಾರದ ಆಟ ಶುರು ಮಾಡಿಕೊಂಡಿದ್ದಾರೆ. ಹೌದು ಬೀದರ್ ಜಿಲ್ಲೆಯ ಕೌಠಾ(ಬಿ) ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಪ್ರಭುದಾಸ್ ಎಂಬಾತರು ಗ್ರಾಮ ಪಂಚಾಯತ ಖರ್ಚಿನಲ್ಲಿ ಲೋಕಾಯುಕ್ತರ ಊಟ ಮತ್ತು ನೀರಿಗಾಗಿ 2000 ಖರ್ಚು ಬರೆದು ಅವಾಂತರ ಮಾಡಿಕೊಂಡಿದ್ದಾರೆ..
ಭ್ರಷ್ಟಾಚಾರದ ತನಿಖೆಗೆಂದು ಬಂದ ಲೋಕಾಯುಕ್ತರ ಹೆಸರಿನಲ್ಲೆ ಮತ್ತೊಂದು ಭ್ರಷ್ಟಾಚಾರ ಮಾಡಿದ ಆರೋಪ ಪಿಡಿಓ ಮೇಲೆ ಗ್ರಾಮಸ್ಥರು ಮಾಡಿದ್ದಾರೆ.

ಕೌಠಾ(ಕೆ) ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶೌಚಾಲಯ ನಿರ್ಮಿಸದೆ 1.80 ಲಕ್ಷ ರೂಪಾಯಿ ಹಾಗೂ ಅಂಗವಿಕರಿಗಾಗಿ ರ್ಯಾಂಪ್ ನಿರ್ಮಿಸದೆ 40 ಸಾವಿರದ 400 ನೂರು ರೂಪಾಯಿ ಹೀಗೆ ಹಲವು ಕಾಮಗಾರಿಗಳು ಮಾಡದೆ ಖಾಸಗಿ ಎಜೇನ್ಸಿ ಹೆಸರಿನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಭುದಾಸ ಸರ್ಕಾರದ ಹಣ ಲೂಟಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.. ಈ ಕುರಿತು ದಾಖಲೆ ಸಮೇತ ಜಿಲ್ಲಾ ಪಂಚಾಯತ ಅಧಿಕಾರಿಗಳಿಗೆ ದೂರಿದರು ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವರದಿ:ನಂದಿನಿ ಮೈಸೂರು

ಶಿವಾ ಮೋಟರ್ಸ್
ಮುಖ್ಯ ಕಛೇರಿ :ನo 356/10/ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ. ಬಿ. ರಸ್ತೆ, ದಾವಣಗೆರೆ -577006. ಶಾಖೆ : ವೀರ ರಾಣಿ ಕೆಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ, ಶಿವಮೊಗ್ಗ -577304. Mob: + 91 7259433400 .8182350116